July 25, 2017: ಪಾದುವ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ಇದರ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ವತಿಯಿಂದ ಒಂದು ದಿನದ ಶಿಬಿರ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಪರಪ್ಪಾಡಿ ನಿರ್ಮಲ ಪದವು ಚರ್ಚ್ ಆವರಣದಲ್ಲಿ ನಡೆಯಿತು. ಮಳೆಗೆ ಕುಸಿದು, ಶೀತಲಗೊಂಡಿದ್ದ ಚರ್ಚಿನ ಆವರಣ ಗೋಡೆಯನ್ನು ತೆರವುಗೊಳಿಸುವ ಕಾರ್ಯವನ್ನು ಘಟಕದ ವಿದ್ಯಾರ್ಥಿಗಳು ಶ್ರಮದಾನದ ಮುಖಾಂತರ ಮಾಡಿದರು. ಶಿಬಿರದಲ್ಲಿ ಸುಮಾರು ೬೫ ಸ್ವಯಂ ಸೇವಕರು ಹಾಗೂ ಘಟಕದ ಯೋಜನಾಧಿಕಾರಿಯಾದ ಶ್ರೀಧರ್ ರವರು ಭಾಗವಹಿಸಿದ್ದರು. ಚರ್ಚಿನ ಧರ್ಮಗುರುಗಳಾದ ರೆ. ಫಾ. ವಿನ್ಸೆಂಟ್ ಲೋಬೋ ಶಿಬಿರ ಆಯೋಜಿಸಿ, ನೆರವು ನೀಡಿದ ರಾಷ್ಟ್ರೀಯ ಸೇವಾ ಯೋಜನೆ, ಪಾದುವ ಕಾಲೇಜು ಘಟಕಕ್ಕೆ ಊರಿನ ನಾಗರಿಕರ ಪರವಾಗಿ ಧನ್ಯವಾದಗಳನ್ನು ಸಮರ್ಪಿಸಿದರು. ಗ್ರಾಮಸ್ಥರೂ ಕೂಡ ಸಕ್ರೀಯವಾಗಿ ಇದರಲ್ಲಿ ಭಾಗವಹಿಸಿದ್ದರು.

 

 

 

 

 

 

 

 

Comments powered by CComment

Home | About | NewsSitemap| Contact

Copyright ©2014 www.nirmalpadavchurch.org. Powered by eCreators

Contact Us

Our lady of Perpetual Succour Church
Nirmalpadav, Parapady P.O-574110 
via Nitte, Karkala Taluk,
Udupi District
Mobile: +91 97419 69665
Email: [email protected]